Tuesday, August 28, 2012

ಮಳೆಗಾಲ



ಮಳೆಗಾಲದಲ್ಲಿ ಎಲ್ಲೆಲ್ಲೂ ಕೊಚ್ಚೆ ರಾಡಿ
ಓಡಾಡುವುದು ಕಷ್ಟ ಬರ್ತಾ ಇರ್ತು ಗಾಡಿ
ಬಿಳಿ ಮುಂಡು ನಂದು ಅಕ್ಕು ಭಾನಗಡಿ
ಹಾರ್ಸೇ ಬುಟ್ನೆ ಆ ಕಾರಿನ ಲಿಗಾಡಿ, ರಾಡಿ

ಕರೆಂಟಾಯಣ


ಅಮವಾಸ್ಯೆ ರಾತ್ರಿಲಿ ಎಲ್ಲ್ ನೋಡ್ರು ಕತ್ತಲೆ

ಚಂದ್ರನು ಬತ್ನಿಲ್ಲೆ ಕರ್ರೆಂಟು ಇರ್ತಿಲ್ಲ್ಲೆ

ಯಾವ ಬದಿಗ್ ನೋಡಿದ್ರು ಘೋರ್ ಕತ್ಲೆನೆ


ಅಂವ ಸಾಯ್ಲಾ ಲೈನಮನ್ನು ಎಲ್ ಕುಡ್ದು ಬಿದ್ದಿದ್ನೋ

ಲೈನ್ ಹರ್ದ್ ಬಿದ್ರುನು ಬತ್ನೆ ಇಲ್ಲೆ

ದುಡ್ ತಗಂಬಲೆ ಬತ್ತ ತಗಂಡವ್ನೇ ಓಡೊಗ್ತ

ನಮ್ಮನೆ ಕರೆಂಟ್ ತೊಂದ್ರೆಗೆ ಕೊನೆನೆ ಇಲ್ಲೆ


ರೇಶನ್ ಅಂಗಡಿಯಂವ ಚಿಮನೆಣ್ಣೆ ಕೊಡ್ತ್ನಿಲ್ಲೆ

ಕಾರ್ಡು ಮಾಡ್ಸಿದ್ದು ಉಪಯೋಗ್ ಇಲ್ಲೆ

ಪರಿಸ್ಥಿತಿ ಗಂಭೀರ ಎಂತದು ಕಾಣ್ತಿಲ್ಲೆ

ತಡಸ್ಕಂಡು ಬೀಳುದೆ ಓಡಾಡಿದ್ರೆ


ಅಚೆಮನೆ ಶಂಕರಣ್ಣ ಬ್ಯಾಟರೀನು ತಗ ಹೋಯ್ದ

ವಾಪಸ್ಸು ಕೊಡುವ ಮಾತೇ ಇಲ್ಲೆ

ಸಾವ್ರ ಸಲ ಕೇಳಿದ್ರೆ ಒಂದ್ ಸಲ ತಂದ್ ಕೊಟ್ಟ

ಬ್ಯಾಟರಿ ಒಳಗಡೆ ಸೆಲ್ಲೇ ಇಲ್ಲೆ


ನನ್ನ ಹೆಂಡ್ತಿ ಕರ್ಗೆಡ್ತು ಸೊಳ್ಳೆನು ಗುಂಯ್ ಗುಡ್ತು

ಸೆಖೆ ಮಾತ್ರ ತಡ್ಕಂಬ್ಲೆ ಆಗ್ತೆ ಇಲ್ಲೆ

ಎಲ್ಲೆಲ್ಲೋ ತಂಪಾಗ್ತು ಬೆವರಿನ ನೀರಿಂದ

ಈ ರಾತ್ರಿ ಜಾಗರಣೆ ಇದ್ದದ್ದೇನೆ


ಪಾಯ್ಖಾನೆಗ್ ಹೋಪ ಅಂದ್ರೆ ಟ್ಯಾಂಕಲ್ಲಿ ನೀರಿಲ್ಲೆ

ಹೊರ್ಗಡೆ ಹೋಪ ಅಂದ್ರೆ ಕಾಣ್ತೆ ಇಲ್ಲೆ

ತಡಕಂಬ್ಲೆ ಆಗ್ತಿಲ್ಲೆ ಅಷ್ಟೊಂದು ರಷ್ ಆಯ್ದು

ತಡ ಆದ್ರೆ ಹಾಸಿಗೆಲೆ ಗ್ಯಾರಂಟೀನೆ





ಮದುವೆ









ನೋಡಿದೆ ಅವಳ ಸರಳ ಸುಂದರಿಯ
ಕಂಡು ಮೋಹಿತನಾದೆ ಆ ಚೆಲುವೆಯ
ನೋಡಿ ನಕ್ಕವಳನ್ನ ಪ್ರೀತಿಸಿದೆ ಪರಿ ಪರಿಯ
ಆದರೂ ತಪ್ಪು ಮಾಡಿದೆನಲ್ಲ ,ಆದೆ ಅವಳನ್ನೇ ಮದುವೆಯ

ಹೆರೆ



ಕುಳಿತೆನು ಕೂಪು ಹಿಡಿದ ಚೂಪು ಮುಖದ ನಾಪಿಕನ ಮುಂದೆ
ಕೇಳಿದನವ ಆಶ್ಚರ್ಯದಿ ಹೆರೆಯಲು ಏನಿದೆ ಬರಿ ಬಟ್ಟ ಬಯಲು
ಹೇಳಿದೆನು ಮೊದಲೇ ಕೂದಲಿಗೆ ಬರ ,ಕತ್ತರಿಸು ಒಂದನ್ನೂ ಬಿಡದೆ
ಮಾಡಿದನು ತಲೆಯ ನುಣುಪಾದ ತಾಮ್ರದ ಚೊಂಬಿನಂತೆ

ಮುಂಜಾನೆ



ಮುಂಜಾನೆ ಏಳುವ ಸಮಯದಿ ಒಂದು ಸಣ್ಣ ಚಿಂತನೆ
ನಿಸರ್ಗ ಎಷ್ಟು ನಿಗೂಢ,ಸುಂದರ ನಿತ್ಯ ನಿರಂತರ
ಹಕ್ಕಿಗಳಿಗೆ ಬೆಳಗಿನಲಿ ಏಳಿಸುವವರಿಲ್ಲ ತಾನೆ
ಉದಯಿಸುವ ಸೂರ್ಯನಿಗೆ ಅಲಾರ್ಮ್ ಇಟ್ಟವರ್ಯಾರ