Saturday, September 8, 2012

ಕಾಲೇಜು ಯುವಕ




ಅವನ ಮನವೇಕೋ ಹೊಯ್ದಾಡುತಿದೆ
ಅವಳು ನೋಡಬಹುದೆ ಇವಳು ನಗಬಹುದೆ
ಅವಳ ಗೆಳೆತನವೋ ಇವಳು ಜೊತೆಯಾಗಬಹುದೇ
ಇವಳು ಫೋನಾಯಿಸಬಹುದೇ ಅವಳು ಮೋಹಿಸಬಹುದೆ
ಅವರಿವರ ಎಲ್ಲರ ಬಗೆಗೆ ಚಿಂತೆ ದುಗುಡ ಆ ನವ ಯುವಕನದು


ಕೇಳಿದವನ ಗೆಳೆಯ, ಯಾರನ್ನು ವರಿಸುವ ತವಕ

ಹೇಳಿದನವ ,ಹಾಹಾ ಇದು ನನ್ನ ನಿತ್ಯದ ಕಾಯಕ

ಹೋಗಿ ಬರುವ ಚಂದದ ಹುಡುಗಿಯರಿಗೆ ನಾನಾಗುವೆ ನಾಯಕ

ವರಿಸುವ ಮಾತಿಲ್ಲ,ಬರಿ ನೋಟದಲ್ಲೇ ಎಲ್ಲಾ, ಕಾಲೇಜು ಮುಗಿಸುವ ತನಕ

No comments:

Post a Comment