Tuesday, September 11, 2012

ಬದುಕು



ಬದುಕು ಮಾಯೆಯ ಮಾಟ ಯಾರ್ದಪ್ಪಾ ಈ ಆಟ
ತೋಟದ ಕೆಲ್ಸಕ್ ಜನ ಇಲ್ಲೆ, ಹಾಳಾಗ್ತ್ರೋ ತೋಟ
ಹೀಂಗೆ ಆದರೆ ಮುಂದೆ ಉಂಬುದ್ ಹೆಂಗೆ 

ಆಳಿಗೆ ಆಸ್ರಿ ಕೊಟ್ಟು ತೋಟದಲ್ಲೇ ಮಜ್ಜಿಗೆ ಕೊಟ್ಟು
ಬಪ್ಪಲಿವರೆಗೆ ಅವಂಗೆ ಊಟಕಾಗ್ತು
ಕೆಲ್ಸ ಎಂತು ಆಗ್ತಿಲ್ಲೆ ಆಳ್ ಲೆಕ್ಕ ಹೆಚ್ಚಾಗ್ತು
ನಾ ಮಾಡಿದ ಖರ್ಮ ಕೇಳವರ್ಯಾರು

ಕೊಳೆ ಮದ್ದು ತುಟ್ಟಿ ಆಯ್ದು ದಿನಸಿ ಅಂಗಡಿಲಿ ಕೈ ಸುಡ್ತು
ಹಬ್ಬ ಬಂದ್ರೆ ಸಾಕು ಬಯ್ಕಂಬ್ದೇಯಾ
ತರಕಾರಿ ತಿಂಬುದ್ ಬಿಡುದೆ , ಹಣ್ಣಂತು ವಿಷ ಅನ್ಸ್ತು
ಅನ್ನ ಕೊಡುವ ನಮಗೆ ಗತಿ ಇಲ್ಲಾ

ನಂಗಂತು ವಯಸ್ಸಾತು ಬೆನ್ ಗೂನು ಬಗ್ಗೋಯ್ದು
ಮನೆಯವಳು ಕೆಮ್ಮಿದರೆ ರಕ್ತ ಬತ್ತು
ದುಡ್ದೆಲ್ಲಾ ಕೊಟಿಗೆಗೆ, ಉಳಿದದ್ದು ಡಾಕ್ಟ್ರಿಗೆ
ಚಿನ್ನ ಮುಟ್ಟುಲಾಗ್ತಿಲ್ಲೆ ಕೈ ಸುಡ್ತು

ಮಾಣಿಗೆ ಮದ್ವೆ ಇಲ್ಲೆ, ಕೂಸೊಂದು ಸಿಗ್ತಿಲ್ಲೆ
ನಂಗ ಮುದಕರಾದುರೂನು ಮೊಮ್ಮಕ್ಕ ಇಲ್ಲೆ
ನಮ್ ಊರಲ್ಲಿ ಸಮ ಇಲ್ಲೆ ಒಬನ್ ಕಂಡ್ರ್ ಇನ್ನೊಬ್ಬಂಗ್ ಆಗ್ತಿಲ್ಲೆ.
ಏನು ಮಾಡುದು ಶಿವನೇ ಕರ್ಕತ್ತಿಲ್ಯಾ

ಕೂಸಂತು ಓಡೋಯ್ದು, ಎಲ್ಲಿದ್ದ ಗುತ್ತಿಲ್ಲೆ
ಅಳಿ ಮಾಣಿ ಯೆಂತ ತಿಂಬವ್ನೋ ಯಾವ ಜಾತಿಯೋ
ಪಕ್ಕದ್ ಮನೆ ಸುಬ್ಬಕ್ಕಂಗೆ ನೆಗ್ಯಾಡುದೆ ಕೆಲ್ಸ
ನಮ್ಮನೆ ಪ್ರಾಣಿಯ ಗೋಳು ತಡೆಯುದ್ ಹೆಂಗೆ

ಬ್ರೋಕರ್ ಶೆಟ್ಟಿ ಸತ್ತೋಗ್ಲಿ ದುಡ್ ತಗಂಡು ಕೈ ಕೊಟ್ಟಾ
ಮೂಗಿಗೆ ತುಪ್ಪ ವರಸಿ ಊರು ಬಿಟ್ಟಾ
ನಂಗಂತು ಮಗ ಇದ್ದ ನಾಲ್ಕ್ ಕಾಳು ಅಕ್ಕಿ ಹಾಕಗು
ಅವನ ಮುಂದಿನ ದಿನ ನೆನೆದ್ರೆ ಜೀವ ಹಾರ್ತು

No comments:

Post a Comment