ಯಾರವರು ಬಂದವರು ನನ್ನ ಮನೆಯಾಚೆ ನಿಂತವರು
ಯಾವ ಮಹನೀಯರವರು ಕದವ ತಟ್ಟುತಿಹರು
ಸರಿ ರಾತ್ರಿಯಾಗಿಹುದು ಮನೆಯವರು ಮಲಗಿಹರು
ನೆಂಟರೋ ಗೆಳೆಯರೋ ಫೋನಾಯಿಸದೇ ಬಂದವರು
ಯಾರಾದರಾಗಲಿ ನೋಡುವೆನು ಒಂದು ಸಲ
ಎನ್ನುತಲಿ ತೆಗೆದೆನು ಮನೆಯ ಹೆಬ್ಬಾಗಿಲ
ಎಲ್ಲೆಲ್ಲೂ ಕತ್ತಲೆಯು ಏನೂ ಕಾಣದು ನನಗೆ
ಗೂಬೆಯೂ ಕೂಗುತಿದೆ ಹೆದರಿಸುವ ಹಾಗೆ
ಗುರುತೂ ಸಿಗದ ಮಾನವನ ಆಕ್ರತಿಯ ಕಂಡೆ
ಕೇಳಿದೆನು ಯಾರಯ್ಯಾ ನೀನು ಏನಾಗಬೇಕು
ನಿಲ್ಲಲಾರದನವ ತೂರಾಡುತಿದ್ದವ ಕುಡಿದಿದ್ದು ಗುಂಡೆ
ಕೇಳಿದನು ಸ್ವಾಮಿ ಹೊಟ್ಟೆಗೆ ಏನಾದರೂ ಬೇಕು
ಒಂದು ಕಡೆ ಸಿಟ್ಟು ಇನ್ನೊಂಡು ಕಡೆ ಮರುಕ
ಯಾಕಯ್ಯಾ ಈ ರೀತಿ ಮಾಡುತಿಹೆ ಕುಡುಕ
ಮನೆಯಲ್ಲಿ ಮನವಿಲ್ಲವೆ ಬದುಕು ಬೇಡವೇ ನಿನಗೆ
ಹೇಳಿದನು ಯಾರಿಹರು ಈ ಲೋಕದಿ ಆಪ್ತರು ನನಗೆ.
ತಂದೆ ತಾಯಿ ಇಲ್ಲವಯ್ಯಾ ಹೆಂಡತಿ ಎಲ್ಲಿಹಳೋ ನನ್ನ ಮರೆತಿಹಳು
ಮಕ್ಕಳೋ ನನ್ನ ಬಳಿಗೆ ಬರಲೊಲ್ಲರು ಒಂಟಿ ಸಾಕೆನಗೆ ಬಾಳು
ಸಾರಾಯಿ ಸರ್ವಸ್ವ ದೇವರು ನನಗೆ ಹಿಂದಿಲ್ಲ ಮುಂದಿಲ್ಲದವಗೆ
ಮರೆಯುವೆನು ನೋವೆಲ್ಲ ಹೀರುತಲಿ ಜೀವಜಲ ಬೇಕೇ ನಿಮಗೆ !!!
ನಾನಂದೆ ಗೆಳೆಯಾ ಬಿಡು ಈ ಹಾಳು ಚಟವಾ ಏನಿದೇ ಸುಖ
ದಾರಿಗಳಿಹವು ಬಹು ವಿಧದ ಮರೆಯಲು ನಿನ್ನಯ ದುಃಖ
ಯಾರಿಲ್ಲವೆಂಬೆ ನೀನ್ಯಾರಿಗಾದೆ ಎಲ್ಲವನೂ ಮರೆತು ಹಾಳಾದೆ
ಜಗವ ನೋಡು ಗಳಿಸು ಜನರ ಸ್ನೇಹ ಬರಿತೆ ಮರುಗದೆ
No comments:
Post a Comment