Tuesday, September 4, 2012

ಹಣ


ಮನುಜ ಹಣವಿಲ್ಲದಿರೆ ಮನೆಯಲೆ ಗಡ್ಡೆ ತರಕಾರಿಯ ತಿಂಬ

ಹಣವಿದ್ದರೆ ಅದೇ ಗಡ್ಡೆಯ, ಪಂಚತಾರಾ ಹೋಟೇಲಲಿ ತಿಂಬ

ಮನುಜ ಹಣವಿಲ್ಲದಿರೆ ನಡೆದೇ ಹೋಗುವ ತಿನ್ನಲು ಆಹಾರ

ಹಣವಿದ್ದರೂ ನಡೆವ, ಕರಗಿಸಲು ಹೊಟ್ಟೆಯ, ತಿಂದ ಆಹಾರ

ಮನುಜ ಹಣವಿಲ್ಲದಿರೆ ಒಂದು ವಿವಾಹ ಆಗುವೆನೆಂಬ

ಹಣವಿದ್ದರೇ ಛೇ ಇವಳೇಕೆ ಮತ್ತೊಂದಿರಲಿ,ವಿಚ್ಛೇದನವೆಂಬ

ಮನುಜ ಹಣವಿಲ್ಲದಿರೆ ಹೆಂಡತಿಯೇ ಕೆಲಸದ ಸಹಾಯಕಿ

ಹಣವಿದ್ದರೇ ಕೆಲಸದ ಸಹಾಯಕಿಯೇ ಅವನ ನಾಯಕಿ

ಮನುಜ ಹಣವಿಲ್ಲದಿರೆ ತೋರಿಸಿಕೊಳ್ಳುವ ಬಹಳ ಶ್ರೀಮಂತನಂತೆ

ಅದೇ ಹಣವಿದ್ದರೆ ಬರಿ ಹೆದರಿಕೆ ತೋರ್ಪಡಿಸುವ ದಿವಾಳಿಯಂತೆ

ನೀನಾಗಿರೋ ಮನುಜ ನಿನ್ನಂತೆ, ಬಿಡು ಪರರ ಚಿಂತೆ

ಹಣವಿರಲಿ ಇರದಿರಲಿ ಗಳಿಸು, ಬಾಳು ನಿನ್ನೆಣಿಕೆಯಂತೆ




No comments:

Post a Comment