Thursday, October 4, 2012

ನನ್ನ ಶಣ್ಣ ಕನಸು

ಸಣ್ಣಕ್ಕಿರುವಾಗ ಅಪ್ಪನಾಂಗೆ ಅಪ್ಪು ಕನಸು

ಆದ್ರೆ ಅಪ್ಪ ಹೊಡ್ದ್ರೆ ಅಪ್ಪ ಭೂತಾನಾಂಗೆ ಕಾಂಬ ಕನಸು


ಬಾಲವಾಡಿಯಲ್ಲಿ ಎಲ್ಲ ಕಲತೇ ಬುಡೋ ಕನಸು


ಐಸ್ ಕ್ಯಾಂಡಿ ಮಾರುಲೆ ಬಪ್ಪು ವಯ್ಯನ್ ನೋಡ್ಕಂಡು ಅವ್ನಾಂಗೆ ಸೈಕಲ್ ಮೇಲೆ ಎಲ್ಲಾ ಊರು ಓಡಾಡಿ ಸಣ್ಣ ಮಕ್ಕೋಕೆ ಖುಶಿ ಪಡ್ಸುವ ಕನಸು


ಹಾಂಗೇ ಚೂರು ದೊಡ್ಡಾಗಿ ಕನ್ನಡ ಶಾಲೆ ಸೇರ್ದಾಗ ಮಾಸ್ತರ್ರು ಕೈ ಮೇಲೆ ಪೆಟ್ಟು ಕೊಡಕರೆ ಮಾಸ್ತರ್ರೇ ಆಗವು ಎಂಬ ಕನಸು


ಹಾಂಗೇ ಚೂರು ದೊಡ್ಡಾದ್ಕೂಡ್ಲೆ ಬಂತಲಿ,ಮೂರ್ಖರ ಪೆಟ್ಟಿಗೆ,ಅದರ್ರ್ಲಿ ಬರೋ ರಾಮಾಯಣ, ಮಹಾಭಾರತ ನೋಡ್ಕಂಡು ಎಲ್ಲಾ ಪಾತ್ರನು ನಾನೆ ಎಂಬಾ ಕನಸು


ಯಕ್ಷಗಾನ ನೋಡ್ಕಂಡು ಆ ಹಾಡು ಕೆಟ್ಟ ಸ್ವರದಲ್ಲಿ ಹಾಡ್ತಾ, ಲಯವಿಲ್ಲದ ನರ್ತನ ಮಾಡ್ತಾ ,ಯಕ್ಷಗಾನ ಕಲಾವಿದನೇ ಆಗ್ತೆ ಎಂಬ ಕನಸು


ಊರಲ್ಲಿ ಅಪ್ಪು ನಾಟಕ ನೋಡ್ಕಂಡು ನಾಟಕದ ಪಾತ್ರಧಾರಿ ಆಗೇ ತೀರ್ತೆ ಅಂಬ ಕನಸು


ಆದ್ರೆ ನಾಟಕದಲ್ಲಿ ಮೊದಲ ಬಾರಿ ಬಣ್ಣ ಹಚ್ಕಂಡು ರಂಗದ ಮೇಲೆ ಹೋದ್ರೆ ಆ ಲೈಟು ಎದುರ್ಗಡೆ ಇಪ್ಪು ಜನರನ್ನ ಕಂಡಕಂಡು ಎಲ್ಲಾ ಟುಸ್ಸು ಟುಸ್ಸು


ಕನ್ನಡ ಶಾಲೆಲಿ ಹೆಡೆಪೆಂಟೆ ಬ್ಯಾಟಲ್ಲಿ ಕ್ರಿಕೆಟ್ ಆಡುಲೆ ಶುರು ಮಾಡ್ದಾಗ ಟಿ.ವಿ ಲಿ ನೋಡಿದ ಕಪಿಲ್ ದೇವ ಶ್ರೀಕಾಂತನಾಂಗೆ ನಾನು ಭಾರತಕ್ಕೆ ಆಡ್ತಾ ಇದ್ದೆ ಅಂಬ ಕನಸು


ಮರ ಹತ್ತಿದ ಗೌಡ ಒಂದು ಅಡಿಕೆ ಮರದಿಂದ ಇನ್ನೊಂದು ಅಡಿಕೆ ಮರಕ್ಕೆ ಜೋತ್ ಬೀಳಕರೆ ನಾನು ಮುಂದೊಂದು ದಿನಾ ಅಡಿಕೆ ಕೊಯ್ತೆ ಹೇಳೋ ಕನಸು


ಬಸ್ ಬಂದ್ರೆ ಬಸ್ ಡ್ರೈವರ್ರು ನಾನೆ ಎಂಬ ಕನಸು ಕಂಡಕ್ಟರ್ ಆದ್ರೆ ಎಲ್ಲರ ಮೇಲೂ ಅಧಿಕಾರ ಚಲಾಯ್ಸಲಕ್ಕು ಹೇಳಿ ಕಂಡಕ್ಟರ್ರೇ ಆಗ್ಬುಟ್ಟೆ ಎಂಬ ಕನಸು


ಅಪ್ಪ ಸೈಕಲ್ ಓಡ್ಸಕರೆ ಛೆ ಇದೆಂತ, ನಂಗ ಸಿಕ್ಕಿರೆ ನಾ ಹೆಂಗ್ ಓಡ್ಸ್ತಿದ್ದೆ ಎಂಬಾ ಕನಸು


ಹಾಯ್ ಸ್ಕೂಲ್ ಸೇರಿದ್ ಕೂಡ್ಲೆ ಅಪ್ಪನ ಎಮ್ 80 ಮತ್ತೊಂದು ಬಹು ದೊಡ್ಡ ಕನಸು


ಗಣಿತದ ಮಾಸ್ತರರಂತೆ ದಪ್ಪ ಮೀಸೆ ಬಂತೆಂಬ ಕನಸು


ಮುಂಬೈನಿಂದ ಬಂದವರು ಹೋಗುವಾಗ ಆ ಅದ್ಭುತ ಬಸ್ಸಿನಲಿ ನಾನು ಹೋಗ ಅಂಬ ಕನಸು ದೇಶ ಸುತ್ತೋ ಮನಸು


ಕಾಲೇಜು ಮಣ್ಣು ಹೊರುವಾಗ ಮುಂದಿನ ಜೀವನದ ಬಹು ದೊಡ್ಡ ಕನಸು

ಪಕ್ಕದ ಮನೆಯ ಅಣ್ಣಂಗೆ ಮದುವೆ ಆದ್ರೆ ನನ್ನ ಸಣ್ಣ ಸಂಸಾರದ ಕನಸು ಒಳ್ಳೆಯ ಅರಮನೆ,ಅದರಲ್ಲೊಬ್ಬ ರಾಣಿ,ಎರಡೇ ಎರಡು ಮಕ್ಕಳು, ಕಾರು, ಬೈಕು, ಎಣಿಸಲಾರದಷ್ಟು ಸಂಬಳದ ಉದ್ಯೋಗದ ಕನಸು

ಈಗ ಎಲ್ಲವನ್ನು ಪಡೆದೆ, ಚೋಲೊ ಇಪ್ಪ ಉದ್ಯೋಗ, ಮನೆ, ಮಡದಿ , ಬೈಕು ಕಾರು ಎಲ್ಲವು ನನಸು


ಆದರೆ ಎಲ್ಲಿದೆ ಆ ಕನಸು ,ಕನಸು ನನಸಾದಂತೆ ಅನ್ನಿಸುವಾಗ ಇಪ್ಪ ಖುಶಿ, ಸುಮಾರು ಎಲ್ಲ ಪಡೆದ ಈ ವೇಳೆಯಲ್ಲಿ


ಈಗೆಲ್ಲಿಯ ಕನಸು , ಯೋಚನೆಗಳ ಸರಮಾಲೆಯಲ್ಲಿ ಎಲ್ಲಿ ಆ ಸುಖ ನಿದ್ರೆ, ಬೀಳುವುದೆಂತು ಆ ಕನಸು ?

No comments:

Post a Comment